ಸಂಸ್ಥೆಯ ಪರಿಚಯ

1.ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉನ್ನತ ಸಂಸ್ಥೆಯಾಗಿದ್ದು, 1996 ರಲ್ಲಿ IPP- IX (K) ಅಡಿಯಲ್ಲಿ ಸ್ಥಾಪಿಸಲಾಯಿತು. ಈ ಸಂಸ್ಥೆಯು ಕುಷ್ಠರೋಗ ಆಸ್ಪತ್ರೆ ಆವರಣ 1 ನೇ ಅಡ್ಡ ರಸ್ತೆ. ಮಾಗಡಿ ಮುಖ್ಯ ರಸ್ತೆ, ಬೆಂಗಳೂರು ಇಲ್ಲಿ ಸ್ಥಾಪಿತವಾಗಿರುತ್ತದೆ.

2.ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯು' ' ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ' ಮುಖ್ಯ ತರಬೇತಿ ಕೇಂದ್ರವಾಗಿರುತ್ತದೆ. ಎಲ್ಲಾ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ತರಬೇತಿಗಳು, ಮೊದಲ ಪ್ರತಿಕ್ರಿಯೆ ತರಬೇತಿ (First Responder training) ಆಡಳಿತಾತ್ಮಕ ತರಬೇತಿಗಳನ್ನುನೀಡಲಾಗುತ್ತಿದೆ.

3. ಇಲ್ಲಿ ಶೈಕ್ಷಣಿಕ ಕೋರ್ಸ್‌ಗಳಾದ DNB ಕೋರ್ಸ್‌ಗಳು, ಪ್ಯಾರಾಮೆಡಿಕಲ್ ಕೋರ್ಸ್‌ಗಳು, LHV, ANM, GNM ಕೋರ್ಸ್‌ಗಳು, PGDHPE, CPHN, ಕೌಶಲ್ಯ ತರಬೇತಿ ಮತ್ತು ಆಸ್ಪತ್ರೆ ನಿರ್ವಹಣೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ವಹಣೆಯಲ್ಲಿ ದೂರಶಿಕ್ಷಣ ಕೋರ್ಸ್‌ಗಳನ್ನು ನೀಡಲಾಗುತ್ತಿದೆ.

4. ಇಲಾಖೆಯಲ್ಲಿ ವೈದ್ಯಕೀಯ ಮತ್ತು ಅರೆವೈದ್ಯಕೀಯ ವ್ಯಕ್ತಿಗಳಿಗೆ ನೀಡಲಾಗುವ ತರಬೇತಿಗಳ ಕುರಿತು ನೀತಿ ರಚನೆ (formulating state training policy) ಯೋಜನೆ, ಅನುಷ್ಠಾನ ಮತ್ತು ಮೇಲ್ವಿಚಾರಣೆಯ ಮೌಲ್ಯಮಾಪನವನ್ನು ರೂಪಿಸುವಲ್ಲಿ ಕಾರ್ಯನಿರ್ವಹಿಸುತ್ತದೆ.

5. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯಡಿಯಲ್ಲಿ 20 ಜಿಲ್ಲಾ ತರಬೇತಿ ಕೇಂದ್ರಗಳು, 4 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಕೇಂದ್ರಗಳು, 10 ಸ್ಕಿಲ್ಸ್ ಲ್ಯಾಬ್, 36 DNB/ಡಿಪ್ಲೊಮ ಕೇಂದ್ರಗಳು, 13 ಪ್ಯಾರಾಮೆಡಿಕಲ್ ಕೇಂದ್ರಗಳು, 20 ANMTC, 5 GNMTC, 4 LHVTC ಕೇಂದ್ರಗಳು, 1 PHDHPE ಬ್ಲಾಕ್ ಮತ್ತು 1 CPHN ಬ್ಲಾಕ್ ಕಾರ್ಯನಿರ್ವಹಿಸುತ್ತಿವೆ.

ರಾ.ಆ.ಕು.ಕ.ಸಂ

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ

ನಿರ್ದೇಶಕರ ಕಚೇರಿ ಇಂದ

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ  ಅತ್ಯುನ್ನತ ತರಬೇತಿ ಸಂಸ್ಥೆಯಾಗಿದೆ.  ಇಲ್ಲಿ  ವೈದ್ಯರ  ಹಾಗೂ ಆರೋಗ್ಯ ಸಿಬ್ಬಂದಿಗಳಿಗೆ ತರಬೇತಿ ಮುಖೇನ ಅವರ  ಸಾಮರ್ಥ್ಯ ಅಭಿವೃದ್ಧಿ ಮಾಡಲಾಗುತ್ತಿದೆ.  ಇದರಿಂದ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಯೋಜನೆ, ಅನುಷ್ಠಾನ ಮೇಲ್ವಿಚಾರಣೆಯನ್ನು ಹಾಗೂ ಮೌಲ್ಯಮಾಪನವನ್ನು ಸುಗಮಗೊಳಿಸುತ್ತದೆ ಮತ್ತು ಆರೋಗ್ಯ ಸುಧಾರಣೆಗೆ ಅನುವು ಮಾಡಿಕೊಡುತ್ತದೆ. 

ನನಗೆ ಈ ಕೆಳಕಂಡ ವಿಷಯಗಳಲ್ಲಿ ಆಸಕ್ತಿ ಇರುತ್ತದೆ.  

ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳನ್ನು ಶೈಕ್ಷಣಿಕ ಸಂಸ್ಥೆಗಳಾಗಿ ಪರಿವರ್ತಿಸುವುದು. 

ಆರೋಗ್ಯ ಸಿಬ್ಬಂದಿಗೆ ಗುಣಮಟ್ಟದ ತರಬೇತಿ ನೀಡುವುದು.  

ತರಬೇತಿ ಮಾಹಿತಿ ನಿರ್ವಹಣೆ ವ್ಯವಸ್ಥೆಯನ್ನು ಸುಧಾರಿಸುವುದು.   

ಸೇವಾ ನಿರತ ವೈದ್ಯರು ಮತ್ತು ಸಿಬ್ಬಂದಿಗಳಿಗೆ ವಾಹಕ  ಪ್ರಗತಿಯನ್ನು  ಒದಗಿಸುವುದು.  

ತರಬೇತಿಯ ಗುಣಮಟ್ಟವನ್ನು ಸುಧಾರಿಸಲು ಅಧ್ಯಾಪಕರ ತರಬೇತಿಯ ಕೌಶಲ್ಯವನ್ನು ವೃದ್ಧಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು. 


ಈ ಸಂಸ್ಥೆ ಅಡಿ ಅಲ್ಲಿ ನಡೆಸಲಾಗುತ್ತಿರುವ ತರಬೇತಿ ಕಾರ್ಯಕ್ರಮಗಳು

 

ಅಧಿಕಾರಿಗಳು

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ

ಡಾ.ತ್ರಿವೇಣಿ. ಎಂ.ಜಿ

ಎಂ.ಬಿ.ಬಿ.ಎಸ್., ಡಿಜಿಒ

ನಿರ್ದೇಶಕರು


 

ಡಾ.ಉಮಾ ಬುಗ್ಗಿ

M.B.B.S,M.D. (ಜನರಲ್ ಮೆಡಿಸಿನ್), P.G.D.G.M (ಜೆರಿಯಾಟ್ರಿಕ್ ಮೆಡಿಸಿನ್) ಫೆಲೋಶಿಪ್ ರೂಮಟಾಲಜಿ

ಅಪರ ನಿರ್ದೇಶಕರು

 

ಡಾ|| ಚಿದಾನಂದ ಹೆಚ್‌.ಗುಡೂರ್

ಎಂ.ಬಿ.ಬಿ.ಎಸ್,ಎಂಡಿ.(ಪಿಡಿಯಾಟ್ರಿಕ್ಸ್),ಪಿ ಜಿ ಡಿ ಎಚ್ ಎಸ್(ಪಿಹೆಚ್)

ಉಪ ನಿರ್ದೇಶಕರು ಎಫ್ ಆರ್ ಟಿ, ಸ್ಕಿಲ್ಸ್ ಲ್ಯಾಬ್ ಟಿಆರ್ & ಫಾರ್ಮಸಿ ಅಧಿಕಾರಿಗಳ ತರಬೇತಿ

ಡಾ|| ಸಂಗೀತಾ ಎಸ್.ಕೋಡ್ಕಣಿ

ಎಂ.ಬಿ.ಬಿ.ಎಸ್‌, ಎಂಡಿ (ರೋಗ ಲಕ್ಷಣ ಶಾಸ್ತ್ರ)

ಉಪ ನಿರ್ದೇಶಕರು

ವಿಮಲಾ ಕೆ ಸಿ

ಸಹಾಯಕ ಆಡಳಿತಾಧಿಕಾರಿ

ಮಮತಾ ವಿ ಪವಾರ್

ಕಛೇರಿ ಸೂಪರಿಂಟೆಂಡೆಂಟ್

 

ಶ್ರೀ ಮುರಳೀಧರ

ಮೊದಲ ವಿಭಾಗದ ಸಹಾಯಕ

 

ಅಕ್ಷತಾ

ಮೊದಲ ವಿಭಾಗದ ಸಹಾಯಕ

 

ರೋಹಿತ್ ಕಾಂಬ್ಳೆ

ಎರಡನೇ ವಿಭಾಗದ ಸಹಾಯಕ

 

ಚೇತನ್ ಕುಮಾರ್ ಎನ್

ಎರಡನೇ ವಿಭಾಗದ ಸಹಾಯಕ

 

ಲಿಂಕ್‌ಗಳು